ಕುಡುಗೊಕ್ಕು

ಪ್ಯಾಸೆರಿಫಾರ್ಮೀಸ್ ಗಣದ ಪ್ಯಾರಡೈಸಿಡೀ ಕುಟುಂಬದ ಡ್ರೆಪ್ಯಾನಾರ್ನಿಸ್ ಜಾತಿಯ ಹಕ್ಕಿ. ವೈಜ್ಞಾನಿಕ ಹೆಸರು ಡೆಪ್ಸಾನಾರ್ಗಿಸ್ ಆಲ್ಬೆರ್ಟಿಸಿ ಕುಡುಗೋಲಿನಂಥ ಕೊಕ್ಕಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ವರ್ಣರಂಜಿತವಾದ ಈ ಹಕ್ಕಿಯ ತಲೆ ಕಂದುಗೆಂಪಾಗಿಯೂ ಗಂಟಲಿನ ಭಾಗ ಹಸಿರಾಗಿಯೂ ಹೊಟ್ಟೆ ಬೆಳ್ಳಗೂ ಎದೆಯ ಭಾಗ ಬೂದುಬಣ್ಣವಾಗಿಯೂ ಇದೆ. ಕಾಲಿನ ಹಿಂದೆ ಇರುವ ಗರಿಗಳು ಬೀಸಣಿಗೆಯಂತೆ ತೆರೆದು ಕೊಂಡಿವೆ. ಕಣ್ಣಿನ ಸುತ್ತ ನೀಲಿಯ ಬಣ್ಣದ ಚಿಕ್ಕಚಿಕ್ಕ ಪುಕ್ಕಗಳು ಇದ್ದು ಕಣ್ಣಿನ ಹಿಂದೆ ಅಗಲವಾಗಿ ಜೋಡಿಸಿಕೊಂಡಿವೆ. `ಸ್ವರ್ಗದ ಹಕ್ಕಿಗಳು' ಎಂದು ವರ್ಗೀಕರಿಸುವ ಹಕ್ಕಿಗಳಲ್ಲಿ ಒಂದು.

 

(ಎಲ್.ಎಸ್.ಜಿ.)

(ಪರಿಷ್ಕರಣೆ: ಕೆ ಎಸ್ ನವೀನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ